GST-Billing user manual in Kannada

Submitted by admin on Tue, 10/17/2017 - 05:14

GST ಬಿಲ್ಲಿಂಗ್ ಸಾಫ್ಟವೇರ್ ಬಗ್ಗೆ:

ಇದು ಒಂದು ಸರಳ ರೀತಿಯಲ್ಲಿ ಉಪಯೋಗಿಸಲು ಅನುಕೂಲಕರ ಸಾಫ್ಟವೇರ್ ಆಗಿರುತ್ತದೆ.

ಇದರಿಂದ ವರ್ತಕರು ತಮ್ಮ ದೈನಂದಿನ ವ್ಯವಹಾರದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಡಬಹುದಾಗಿದೆ.

ಉದಾಹರಣೆಗೆ: ಖರೀದಿ, ವಿಕ್ರಿ, ಪೇಮೆಂಟ್ ಮತ್ತು ರಿಶೀದಿಗಳ ಮಾಹಿತಿಗಳನ್ನು ಕೂಡಿಡಬಹುದು ಮತ್ತು ಜೊತೆಗೆ ಇತರೆ ಖರ್ಚು-ವೆಚ್ಚಗಳ ಮಾಹಿತಿ ಕಲೆ ಹಾಕಲು ಅನುಕೂಲಕರವಾಗಿದೆ.

GST ಬಿಲ್ಲಿಂಗ್ ಸಾಫ್ಟವೇರ್ ನ ವಿಶೇಷತೆಗಳು

ಈ ಸಾಫ್ಟವೇರ್ ನ ಸಹಾಯದಿಂದ ನಿಮಗೆ ನಿಮ್ಮ ವಹಿವಾಟಿಗೆ ಸಂಬಂಧಿಸಿದ ರೀಜಿಸ್ಟರ್ ಅಥವಾ ಖಾತೆಗಳ ವಿವರ ಸಿಗುತ್ತದೆ.

  1.        ಖರೀದಿ & ವಿಕ್ರಿ ರೀಜಿಸ್ಟರ್
  2.        ಸ್ಟಾಕ್ ರೀಜಿಸ್ಟರ್
  3.        ಬ್ಯಾಂಕ್ ಬ್ಯಾಲೆನ್ಸ್
  4.        ಕ್ಯಾಶ್ ಬ್ಯಾಲೆನ್ಸ್
  5.        ಗ್ರಾಹಕರ ಖಾತೆಯ ಮಾಹಿತಿ
  6.        ವೆಂಡೆರ್ ಖಾತೆ ಮಾಹಿತಿ
  7.        ಆಯ-ವ್ಯಯ ಖಾತೆ ಹಾಗೂ ಇತರೆ ಖಾತೆಗಳು ಮಾಹಿತಿ ಸಿಗುತ್ತದೆ.

ಟ್ಯಾಕ್ಸ್ ಸಲಹೆಗಾರರಿಗೆ ಕೊಡುವ GST ಗೆ ಸಂಬಂಧಿಸಿದ ರಜಿಸ್ಟರಗಳ ಮಾಹಿತಿ ಸುಲಭವಾಗಿ ಸಿಗುತ್ತದೆ.